Tuesday, October 9, 2018

ಕೊಡವ ಕವನ - ಚೆಟ್ಟೋಳಿರ ಶರತ್ ಸೋಮಣ್ಣ

*ಬಾ ನೋಟ್ ನಂಗಡ ಕೊಡವ ನಾಡ್*

ಬಾ ನೋಟ್ ನಂಗಡ ಕೊಡವ ನಾಡ್,
ವೀರಂಗ ಪುಟ್ ನ ಈ ನಾಡ್,
ವೀರ ಭೂಮಿಂದ್ ಕೇಳಿ ಪಟ್ಟ ಈ ವೀರನಾಡ್,
ಬಾ ಒಮ್ಮ ನೋಟ್ ನಂಗಡ ಕೊಡವ ನಾಡ್.

ಕಾವೇರಿ ಇಗ್ಗುತಪ್ಪಂಡ ಆಶೀರ್ವಾದತ್ ರ  ಈ ನಾಡ್,
ಆಸೆ ಪ್ರೀತಿರ ನಂಗಡ ನಾಡ್,
ಸ್ವಾಭಿಮಾನತ್ರ ಈ ಗೂಡ್,
ಬಾ ಒಮ್ಮ ನೋಟ್ ನಂಗಡ ಕೊಡವ ನಾಡ್.

ಪ್ರಕೃತಿರ ಸೌಂದರ್ಯ ಈ ನಾಡ್,
ಜೀವನತ್ ಒಮ್ಮ ನೋಟೊಂಡು ಈ ಮಲೆನಾಡ್,
ನಂಗ ಪುಟ್ಟಿ ಬೊಳ್ಂದ ಪುಣ್ಯ ನಾಡ್,
ಬಾ ಒಮ್ಮ ನೋಟ್ ನಂಗಡ ಕೊಡವ ನಾಡ್

ಪೊನ್ನ್ ತೇನ್ ಚೋದ್ ರ ಈ ನಾಡ್,
ಬೆಟ್ಟ ಗುಡ್ಡ ಮಂಜ್ರ ಈ ನಾಡ್,
ಕೊಡವಡ  ಪೊನ್ನ್ ನಾಡ್,
ಬಾ ಒಮ್ಮ ನೋಟ್ ನಂಗಡ ಕೊಡವ ನಾಡ್.

✒ *ಚೆಟ್ಟೋಳಿರ ಶರತ್ ಸೋಮಣ್ಣ*

Saturday, October 6, 2018

ಕೊಡವ ಕವನ

ಕೊಡವ ಕವನ

ನಾಡ ಹೃದಯ ಚೆರಿಯದ್ ದಾರ್ ಕು ಅರ್ಥ ಆಕತಚಕ್
ನಂಬಲ ಉಂಡ್,
ಸಪ್ನ ಉಂಡ್,
ಖುಷಿ ಉಂಡ್,
ಆಸೆ ಉಂಡ್,
ಗ್ಯಾನ ಉಂಡ್,
ಎಲ್ಲಾಗುಂಜಿ ಜಾಸ್ತಿ ಮರ್ ಪಕಯ್ಯತಂತ ನೀಡಪ್ರೀತಿ ಉಂಡ್.

ನೀಡ ಪ್ರೀತಿರ
✒ಚೆಟ್ಟೋಳಿರ ಶರತ್ ಸೋಮಣ್ಣ
*7795307499*

Tuesday, September 25, 2018

ಕೊಡವ ಕವನ - ಚೆಟ್ಟೋಳಿರ ಶರತ್ ಸೋಮಣ್ಣ

*ಒಡ್ಂದ ಎದೆಗೂಡ್*

ನಾನ್ ನೀನ್ ಬುದ್ದತ್ ಪ್ರೀತಿಲ್ ಅಂದ್,
ನಂಗಡ ಈ ಪ್ರೀತಿ  ತೀಂದತ್ ಇಂದ್,

ನಾಡ ಮೇಲೆ ತಪ್ಪು ಗ್ಯಾನ ನೀನ್ ಮಾಡಿಯ,
ನನ್ನ ಬುಟ್ಟಿತ್ ನೀನ್ ಓಡಿಯ,

ನೀಡ ಪ್ರೀತಿನಾ ಪಾರಕಾತಂಡ್ ಇಂಜತ್ ನಾಡ ಹೃದಯ,
ನಾಡ ಪ್ರೀತಿನ ನೀನ್ ಮರ್ಂದಿಯ,

ಇಂದ್ ನಾಡ ಪ್ರೀತಿನಾ ಅರ್ಂ ಜಿತ್ ನೀನ್ ಬಂದಿಯ,
ಪುನಾ ನಾಡ ಪ್ರೀತಿ ಕಾಯಿತ್ ಕಣ್ಣೀರ್ ಇಟ್ಟಿಯ,

ಆ ಕಣ್ಣೀರ್ಲ್ ನನ್ನಾ ಮಾಪ್ ಕೆಟೀಯ,
ನಾಡ ಪ್ರೀತಿಕ್ ನೀನ್ ಚೋತಿಯ,

ನನ್ನ ಬುಟ್ಟಿತ್ ಪೋಪುಲೆ ಎಣ್ಣೊ ಬಾಸೆ ತಂದಿಯ,
ಇಂದ್ ನಾಡ ಕೈ ಬುಟ್ಟಿತ್ ಪೋಯಿಟಿಯ.
😭😭😭😭😭
💔💔💔💔💔

✒  ಚೆಟ್ಟೋಳಿರ ಶರತ್ ಸೋಮಣ್ಣ
7795307499

Friday, August 31, 2018

ಒಂದ್ ವಿಷ್ಯ

ಕೊಡಗಿನ ಇಂದಿನ ಪರಿಸ್ಥಿತಿಗೆ ಅತಿಯಾದ ಆಧುನೀಕರಣ ಹಾಗೂ ಪ್ರವಾಸೋದ್ಯಮವೇ ಕಾರಣವೆಂದು ಹಲವರ ಅಭಿಪ್ರಾಯ.. ಅದೇನೇ ಇರಲಿ ಈಗ ನಾನು ಮಾತನಾಡುವ ವಿಷಯ ಮತ್ತದೇ ಸಾಮಾಜಿಕ ಜಾಲತಾಣಗಳಲ್ಲಿ ನಡೆದ ಒಂದು ಘಟನೆಯ ಬಗ್ಗೆ. ಮೊನ್ನೆ ಯಾರೋ ಒಬ್ಬ ಪಕ್ಕಾ ವ್ಯವಹಾರಸ್ಥ ಕೊಡಗಿನ ಪರಿಸ್ಥಿತಿಯ ಲಾಭ ಪಡೆದು ಹಣ ಗಳಿಸುವ ಉದ್ದೇಶದಿಂದ  ಪ್ರವಾಸಿಗರನ್ನು ಕೊಡಗಿಗೆ ಆಹ್ವಾನಿಸಿ ರಿಯಾಯಿತಿ ದರದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಪ್ರಕಟಿಸಿದ..( DC ಯವರ ನಿಷೇದ ಇದ್ದಾಗಿಯೂ ಪ್ರಕಟಿಸಲಾಗಿತ್ತು)
ನೊಂದು ಬೆಂದ ಕೊಡಗಿನಲ್ಲಿ ಇಂತಹ ಲಜ್ಜೆಗೆಟ್ಟ ನಡವಳಿಕೆ ಕಂಡು ಬೇಸತ್ತ ವ್ಯಕ್ತಿಯೊಬ್ಬರು ಕೊಡಗಿನ ಇಂದಿನ ಪರಿಸ್ಥಿತಿಯಲ್ಲಿ ನಿಮ್ಮ ಪ್ರಕಟಣೆ ಸರಿಯಲ್ಲವೆಂದು ಹೇಳಿದಾಗ ವ್ಯವಹಾರಸ್ಥ ಕೊಡಗು ನಡೆಯುತಿರುವುದೇ ಪ್ರವಾಸೋದ್ಯಮಾದಿಂದ ಎಂದು ಹೇಳಿ ತನ್ನ ಲಜ್ಜೆಗೇಡಿತನ ತೋರಿಸಿಬಿಟ್ಟ..ಕೊಡಗಿನ ಜನರು ಅವನಿಗೆ ಸಮದಾನದಿಂದಲೇ ಪರಿಸ್ಥಿತಿಯ ಅರಿವು ಹಾಗೂ ಕೊಡಗಿನ ತನ್ನದೇ ಆದ ಸ್ವಂತ ಆದಾಯ ಮೂಲದ ಬಗ್ಗೆ ತಿಳಿಸಿದ್ದರು. ಆದರೆ ಈಗ ಅದು ಅಲ್ಲಿಗೆ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ, ವ್ಯವಹರಸ್ಥನ ಬೆಂಬಲಕ್ಕೆ ಕೆಲವರು ನಿಂತು ಕೊಡಗು ಪ್ರವಾಸೋದ್ಯಮದಿಂದಲೇ ನಡೆಯುತಿರುವುದು ಎಂದು ಸಾಬೀತು ಪಡಿಸುವ ತವಕದಲ್ಲಿದ್ದಾರೆ.

ನಾನೊಬ್ಬ ಕೊಡಗಿನ ಸಾಮಾನ್ಯ ಮನುಷ್ಯ ನನ್ನಗೆ ವ್ಯವಹಾರಗಳು ತಿಳಿಯುವುದಿಲ್ಲ ಪ್ರವಾಸೋದ್ಯಮದ ವಿಷಯಗಳು ತಿಳಿಯುವುದಿಲ್ಲ.. ಆದರೆ ನಾನು ಹುಟ್ಟುವ ಮೊದಲೇ ಕೊಡಗು ಜಿಲ್ಲೆಯಿತು. ಕೊಡಗು ವೀರ ದೀರರ ನಾಡು, ಹೆಮ್ಮೆಯ ನಾಡು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರನ್ನು ದೇಶಕ್ಕೆ ನೀಡಿದ ನಾಡು, ಪ್ರಕೃತಿಯ ತಾಣ ಇನ್ನು ಹಲವು ಬಗೆಯಲ್ಲಿ ಕೊಡಗನ್ನು ವರ್ಣಿಸುತಿದ್ದರು.. ಕೆಲ ವರ್ಷಗಳ ಹಿಂದೆ ನಾನು ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕಾಲದಲ್ಲಿ ನಾನು ಕೊಡಗಿನವನು ಎಂದು ತುಸು ಹೆಚ್ಚೇ ಗೌರವ ಸಿಗುತ್ತಿದ್ದದು ನನಗಿನ್ನೂ ನೆನಪಿದೆ, ಕೊಡಗಿನ ಜನರ ಜೀವನ ಶೈಲಿ, ಆಹಾರ, ಸೊಬಗು ಕಂಡು ಜನರು ಆಕರ್ಷಿತರಾದರು ಅಲ್ಲದೆ ಕೊಡಗು ಎಂದಿಗೂ ಪ್ರವಾಸೋದ್ಯಮಕಾಗಿ ರೂಪುಗೊಂಡಿಲ್ಲ, ಕೊಡಗಿನ ಮೂಲನಿವಾಸಿಗಳು ಇಂದಿಗೂ ಸಹ ತಮ್ಮದೇ ದುಡಿಮೆಯಲ್ಲಿ ಸಂತೋಷವಾಗಿಯೇ ಬದುಕುತಿದ್ದಾರೆ ಅವರಿಗೆ ಯಾವುದೇ ಪ್ರವಾಸೋದ್ಯಮದ ಅವಶ್ಯಕತೆ ಇಲ್ಲ. ಪ್ರವಾಸೋದ್ಯಮಾದಿಂದ ಬೆರಳೆಣಿಕೆಯಷ್ಟು ಜನರಿಗೆ ಒಳ್ಳೆಯದಾಗಿರಬಹುದು ಆದರೆ ಅದು ಕೊಡಗಿಗೆ ಮಾರಕ ಎಂಬುದರಲ್ಲಿ ಸಂಶಯವಿಲ್ಲ. ಹಣ ಗಳಿಸುವ ಬಯಕೆಯ ಕೆಲವು ಜನರ ಪೊಳ್ಳು ಅಭಿಪ್ರಾಯಗಳಿಗೆ ಕಿವಿಗೋಡುವ ಅವಶ್ಯಕತೆ ಇರುವುದಿಲ್ಲ ಕೊಡಗು ಚಿರಾಯು ಯಾರಿದ್ದರು ಇಲ್ಲದಿದ್ದರೂ ನನ್ನ ಕೊಡವನಾಡು ಎಂದೆಂದಿಗೂ ರಾರಾಜಿಸುತ್ತಲೇ ಇರುತದೆ..
ತಪ್ಪಿದರೆ ತಿಳಿಸಿ ಶ್ರದ್ಧೆಯಿಂದ ಕಲಿತುಕೊಳ್ಳುತ್ತೆನೆ.
ನಿಮ್ಮ ಬೋಪಯ್ಯ

ಅನಿಸಿಕೆ

ನನ್ನ ಸುಂದರ ಕೊಡಗು ವಿರುಪಗೊಂಡಿತ್ತು, ಪ್ರಕೃತಿ ಮುನಿಸಿಕೊಂಡು ಹಾಲಹಲಗೊಂಡಿತು, ಜನ ಪರಿತಪಿಸುತಿದ್ದರು ದಾರಿ ಕಾಣದಗಿದ್ದರು, ಆಗಲೇ ತಿಳಿದಿದ್ದು ಕೊಡಗಿನ ತಾಕತ್ತು, ಒಗ್ಗಟು. ಸಂಘಪರಿವಾರಗಳು, ಯುವಕರು, ಸ್ನೇಹಿತರು ,ಸ್ವಯಂಸೇವಕರು ಹೀಗೆ ಅನೇಕರು ಜೀವದ ಹಂಗು ತೊರೆದು ಸಹಾಯಕ್ಕೆ ದಾವಿಸಿಬಿಟ್ಟರು ನೀರು ಆಹಾರ ಇಲ್ಲದೆ ಹಗಲು ರಾತ್ರಿ  ಲೆಕ್ಕಿಸದೇ ಧರ್ಮ ಭೇದ ವಿಲ್ಲದೆ  ರಕ್ಷಣೆಗೆ ಧಾವಿಸಿದರು ಅದರಲ್ಲಿ ಯಾವ ಸ್ವಾರ್ಥವು ಇರಲಿಲ್ಲ (ಬೆರಳೆಣಿಕೆಯ ಪಾಪಿಗಳು ತಮ್ಮ ಬೇಳೆ ಬೇಯಿಸಿ ಕೊಳ್ಳಲು ಯತ್ನಿಸಿದ ಕೆಲವರನ್ನು ಬಿಟ್ಟು).ಅವರೆಲ್ಲರೂ ಈ ಸಮಯದಲ್ಲೂ ಕೊಡಗಿನ ಪುನಾರಚನೆಗೆ, ಪುನರ್ವಸತಿಗಾಗಿ ಯೋಚಿಸುತಿದ್ದಾರೆ. ಇದರ ಮದ್ಯೆ ನನಗೆ  ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಗಮನ ಸೆಳೆಯಿತು, ಒಬ್ಬ ಯುವಕ ಕೊಡಗಿನ ಪರಿಸ್ಥಿತಿಯ ಬಗ್ಗೆ  ಮಾತನಡುತಿದ್ದ, ಜಾತಿ  ವ್ಯವಸ್ಥೆಯ ಮೇಲೆ ಕೆಂಡ ಕಾರುತಿದ್ದ. ಒಳ್ಳೆಯದೇ, ಆದರೇ ತನ್ನ ಸಿಟ್ಟು ಹೊರಗೆ ಹಾಕುವ ಸಮಯ ಇದಲ್ಲ ಎಂಬುದು ನನ್ನ ಅನಿಸಿಕೆ.. ಪರಿಸ್ಥಿತಿ ಹೀಗಿರುವಾಗ ನೋಂದವರಿಗೆ ಸಾಂತ್ವಾನ ಹೇಳುವ ಅಪಾಯದಲ್ಲಿರುವವರಿಗೆ     ದೈರ್ಯ ತುಂಬುವ ಕೆಲಸಗಳಾಗಬೇಕು ನಮ್ಮ ಕೈಲಾದ ಸಹಾಯ ಮಾಡುವ ಅಥವಾ ಉಪಯುಕ್ತ ಮಾಹಿತಿಗಳ್ಳನ್ನು ಬೇಕಾದವರಿಗೆ ತಲುಪಿಸುವ ಕೆಲಸ ಮಾಡಬೇಕು. ಕಷ್ಟದಲ್ಲಿ ಇದ್ದವರನ್ನು ಕಾಪಾಡುವ ಪ್ರಯತ್ನ ಬಿಟ್ಟು ಹೀಗೆ ಅಸಮಂಜಸವಾಗಿ ಇಂಥಹ ಸಮಯದಲ್ಲಿ ಮಾತನಾಡುವುದು  ಸರಿಯಲ್ಲವೆಂದು ನನ್ನ ಅಭಿಪ್ರಾಯ  ತಪ್ಪಿದ್ದರೆ ತಿಳಿಸಿ ಕಲಿಯಲು ನಾನು ಸದಾ ಸಿದ್ದ.
ನಿಮ್ಮ  ಬೋಪಯ್ಯ.